ಶ್ರೀ ಶಾಸ್ತಾವು ದೇವಸ್ಥಾನ

History

ಕ್ಷೇತ್ರ ಪರಿಚಯ

ಪ್ರಕೃತಿ ರಮಣೀಯವಾದ ನದಿ, ಕಾಡು, ಬೆಟ್ಟ, ಕೊಳ್ಳಗಳಿಂದ ಆವೃತವಾಗಿರುವ ಪೆರಾಜೆ ಗ್ರಾಮವು ಪೂಮಲೆ ಮತ್ತು ಕೊಳಿಕ್ಕಮಲೆ ಬೆಟ್ಟಗಳ ಮಡಿಲಲ್ಲಿದ್ದು, ಆಡಳಿತ ದೃಷ್ಟಿಯಿಂದ ಮಾತ್ರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿಗೆ ಸೇರಿದ ಗ್ರಾಮವಾಗಿದೆ. ಭೌಗೋಳಿಕವಾಗಿ ಸುಳ್ಯ ತಾಲೂಕಿನ ಆಲೆಟ್ಟಿ ಮತ್ತು ಅರಂತೋಡು – ತೊಡಿಕಾನ ಗ್ರಾಮಗಳ ನಡುವೆ ಪೆರಾಜೆ ಗ್ರಾಮವು ಇರುವುದರಿಂದ ಸಹಜವಾಗಿ ಇಲ್ಲಿನ ಜನರ ಸಾಮಾಜಿಕ ಸಂಬಂಧಗಳು, ಆರ್ಥಿಕ ವ್ಯವಹಾರಗಳು ಹತ್ತಿರದ ದಕ್ಷಿಣ ಕನ್ನಡದ ಗ್ರಾಮದವರೊಂದಿಗೆ ಬೆಸೆದಿದೆ. ಇದಲ್ಲದೆ ಕೊಡಗು, ದಕ್ಷಿಣ ಕನ್ನಡ, ಕೇರಳ ರಾಜ್ಯದ ಮಿಶ್ರ ಸಂಸ್ಕೃತಿಯನ್ನು ಕಾಣಬಹುದು. ಈ ಸಂಸ್ಕೃತಿಯನ್ನು ಮುಖ್ಯವಾಗಿ ದೇವಸ್ಥಾನದ ಆಡಳಿತ ವ್ಯವಸ್ಥೆ, ಜಾತ್ರೋತ್ಸವ ಮತ್ತು ಭೂತಾರಾಧನೆಯಲ್ಲಿ ಕಾಣುತ್ತೇವೆ.

ಹಿಂದೆ ಸುಳ್ಯ ಸೀಮೆಯು ಕೊಡಗಿನ ರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು. ಸುಳ್ಯ ಸೀಮೆಯನ್ನು ಅಷ್ಟ ಬಲ್ಲಾಳ್ತಿಯರು ಎಂಬ ಎಂಟು ಮಂದಿಯಲ್ಲಿ ಅಕ್ಕು ಬಲ್ಲಾಳ್ತಿ ಮತ್ತು ದೆಯ್ಯು ಬಲ್ಲಾಳ್ತಿ ಎಂಬ ಸಹೋದರಿಯರು ಆಳ್ವಿಕೆ ಮಾಡುತ್ತಿದ್ದರು. ಇವರ ಆಡಳಿತದ ಮೂಲಸ್ಥಾನ ಈಗ ಸೋಮಕೋಟ್ಯ ಎಂದು ಕರೆಯಲ್ಪಡುವ ಸ್ಥಳದಲ್ಲಿತ್ತು ಎನ್ನುವುದು ಪ್ರತೀತಿ. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತವು ಈ ಎರಡು ಸಹೋದರಿಯರಿಂದ ಮೂಲೆಮಜಲು ಮನೆತನದವರಿಗೆ ಬಂದಿತ್ತೆಂದು ಹೇಳಲಾಗುತ್ತಿದೆ.

ಪೆರಾಜೆ ಗ್ರಾಮವು ಕರ್ಣೆಂಬಾಡು ಎಂಬ ನಾಯಕನ ಆಡಳಿತಕ್ಕೆ ಒಳಪಟ್ಟಿತ್ತು. ಸುಳ್ಯ ತಾಲೂಕಿನ ಕೆಲವು ಭಾಗಗಳು ಈತನ ಆಡಳಿತಕ್ಕೆ ಒಳಪಟ್ಟಿತ್ತು. ಸೀಮೆ ಸ್ಥಳವಾದ ಭಾಗಮಂಡಲದಲ್ಲಿ ಕರ್ಣೆಂದಾಡು ನಾಯಕನ ಆಸ್ಥಾನವಿತ್ತೆಂದು ಹೇಳಲಾಗುತ್ತಿದೆ. ಕಾವೇರಿ ಯಾತ್ರೆಗಾಗಿ ಪೆರಾಜೆ ಗ್ರಾಮವನ್ನು ಪ್ರವೇಶಿಸುವ ದಕ್ಷಿಣಕನ್ನಡದ ಯಾತ್ರಿಕರ ಊಟಕ್ಕಾಗಿ ಶ್ರೀ ಶಾಸ್ತಾವು ದೇಗುಲದಲ್ಲಿ ಪೆಜ್ಜೆ (ಊಟ) ನೀಡುವ ಏರ್ಪಾಡಾಗಿತ್ತು. ಈ ವ್ಯವಸ್ಥೆಗಾಗಿ ಕರ್ಣಂಬಾಡು ನಾಯಕ ಭಾಗಮಂಡಲದಿಂದ ಹನ್ನೆರಡು ಮುಡಿ ಅಕ್ಕಿಯನ್ನು ಕಳುಹಿಸುವುದರ ಜೊತೆಗೆ ಉಂಬಳಿಯಾಗಿ ಭೂಮಿಯನ್ನು ಕೊಟ್ಟಿದ್ದನು. ಈ ‘ಪೆಜ್ಜೆ’ ಎನ್ನುವ ಶಬ್ದದಿಂದಾಗಿ ಮುಂದೆ ‘ಪೆರಾಜೆ’ ಹೆಸರು ಬಂತೆಂದು ಹೇಳಲಾಗುತ್ತಿದೆ. ಪಾಳೆಗಾರರ ನಂತರ ಹಾಲೇರಿ ವಂಶದ ಅರಸರು ಕೊಡಗನ್ನು ಆಳ್ವಿಕೆ ಮಾಡಿದರು. ಕ್ರಿ. ಶ. 1834ರಲ್ಲಿ ಹಾಲೇರಿ ವಂಶದ ಅರಸ ಚಿಕ್ಕ ವೀರರಾಜನನ್ನು ಬ್ರಿಟೀಷರು ಪದಚ್ಯುತಿಗೊಳಿಸಿದರು. ಇದರಿಂದ ಜನರು ಬ್ರಿಟಿಷರಲ್ಲಿ ಅಸಮಾಧಾನಗೊಂಡು ದಂಗೆಯೆದ್ದರು. ಕ್ರಿ. ಶ. 1835 1837ರ ‘ಕಲ್ಯಾಣಪ್ಪನ ಕಾಟುಕಾಯ’ ಎಂಬ ಹಣೆಪಟ್ಟಿಯ ಅಮರ ಸುಳ್ಯದ ಕ್ರಾಂತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಪೆರಾಜೆ ಗ್ರಾಮದ ಸ್ಥಾನಿಕ ಬ್ರಾಹ್ಮಣ ಕೃಷ್ಣಯ್ಯನವರು ಭಾಗವಹಿಸಿದ್ದರು. ಆದರೆ ಈ ದಂಗೆಯು ವಿಫಲಗೊಂಡು ಇವರಿಗೆ ಜೀವಾವಧಿ ಶಿಕ್ಷೆಯಾಯಿತು. ಸುಳ್ಯವನ್ನು ದಕ್ಷಿಣಕನ್ನಡ ಜಿಲ್ಲೆಗೆ ಸೇರಿಸಿ, ಮದರಾಸು ಪ್ರಾಂತ್ಯದ ಭಾಗವನ್ನಾಗಿ ಮಾಡಿ ಬ್ರಿಟೀಷರು ತಮ್ಮ ನೇರ ಆಡಳಿತಕ್ಕೆ ತೆಗೆದುಕೊಂಡರು. ಪೆರಾಜೆ ಗ್ರಾಮ ದಕ್ಷಿಣಕನ್ನಡ ಜಿಲ್ಲೆಗೆ ಸೇರಿ ಮದರಾಸು ಪ್ರಾಂತ್ಯಕ್ಕೆ ಸೇರುವುದೆಂದು ಮನಗಂಡು ಕೊಡಗಿನ ಜನತೆ ಬ್ರಿಟಿಷರಲ್ಲಿ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಪೆರಾಜೆ, ಚೆಂಬು ಮತ್ತು ಸಂಪಾಜೆ ಗ್ರಾಮಗಳಿಂದ ಹಿಂಗಾರ, ಕದಿರು, ತೆಂಗಿನಕಾಯಿ ಇತ್ಯಾದಿಗಳು ಧಾರ್ಮಿಕ ಕಾರ್ಯಗಳಿಗೆ ನೀಡುವ ಊರುಗಳಾದುದರಿಂದ ಕೊಡಗಿನಲ್ಲಿ ಉಳಿಸಿಕೊಳ್ಳಲು ಮಾಡಿದ ಮನವಿಯಂತೆ ಮೂರು ಗ್ರಾಮಗಳು ಹಿಂದಿನಂತೆ ಕೊಡಗಿಗೆ ಸೇರಿದವು.

ಸೌಂದರ್ಯ ರಮಣೀಯವಾದ ಕೊಡಗಿನ ಆದಿಭಾಗದಲ್ಲಿ ಪಾಪನಾಶಿನಿಯಾದ ಪಯಸ್ವಿನಿ ನದಿಯ ತಟದಲ್ಲಿ ನೆಲೆನಿಂತ ಗ್ರಾಮದ ಆರಾಧ್ಯ ದೇವರಾದ ಶ್ರೀ ಶಾಸ್ತಾವು ದೇವಸ್ಥಾನವು ಸುಮಾರು 2000 ವರ್ಷಗಳಷ್ಟು ಪುರಾತನವಾಗಿದ್ದು, ಭಾಗಮಂಡಲ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿಯ ಶ್ರೀ ಕಾವೇರಿ ಮಾತೆಯ ಸೀಮೆ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಈ ಹಿಂದೆ ಮೂರು ಭಾರಿ ಸಂಪೂರ್ಣ ನಶಿಸಿ ಮತ್ತು ಪುನರ್‌ನವೀಕರಣಗೊಂಡಂತಹ ಕ್ಷೇತ್ರವಾಗಿದೆ. ಸುಮಾರು 300 ವರ್ಷಗಳಿಂದಾಚೆಗೆ ಹುಲ್ಲು ಹಾಸಿನ ಮಾಡಿನಿಂದ ಇದ್ದಿರುವ ದೇವಸ್ಥಾನವನ್ನು ನಂತರ ಹೆಂಚು ಹಾಕಿ ನಿರ್ಮಿಸಲಾಯಿತು.  1983ರಲ್ಲಿ ಜಿರ್ಣೋದ್ಧಾರಗೊಂಡು ತದನಂತರ 2017ರಲ್ಲಿ ಸಂಪೂರ್ಣ ನವೀಕರಣಗೊಳಿಸಿ ಶೀಲಾಮಯ ದೇವಸ್ಥಾನಕ್ಕೆ ಬ್ರಹ್ಮ ಕಲಶ ನೆರವೇರಿಸಲಾಯಿತು.

ಅನಾದಿ ಕಾಲದಿಂದಲೂ ನೀಲೇಶ್ವರದ ಉಚ್ಚಿಲತ್ತಾಯ ಕುಟುಂಬದವರು ದೇವಸ್ಥಾನಕ್ಕೆ ತಂತ್ರಿ ವರ್ಗದವರಾಗಿರುತ್ತಾರೆ.  ಪ್ರಸ್ತುತ ಉಚ್ಚಿಲತ್ತಾಯ ಪದ್ಮನಾಭ ನವರು ತಂತ್ರಿಗಳಾಗಿ ಮಾರ್ಗದರ್ಶನ ಮಾಡುತಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಪ್ರಧಾನ ದೇವರಾಗಿ ಶ್ರೀ ಶಾಸ್ತಾವು ಸಪರಿವಾರ ದೇವರಾಗಿ ಶ್ರೀ ಮಹಾಗಣಪತಿ ಶ್ರೀ ಅನ್ನಪೂರ್ಣೇಶ್ವರಿ ನಿತ್ಯ ಮೂರು ಹೊತ್ತಿನ ಪೂಜೆಯೊಂದಿಗೆ ಆರಾಧಿಸಲ್ಪಡುತ್ತಿದೆ ದೇವಸ್ಥಾನದ ಹೊರಾಂಗಣದಲ್ಲಿ ಶಿವ ಪಾರ್ವತಿ ಎಂಬ ನಂಬಿಕೆಯಲ್ಲಿರುವ ಕರಿಭೂತ ಕೋಮಾಳಿ ಎಂಬ ದೈವಕ್ಕೆ ಎರಡು ಹೊತ್ತಿನ ಪೂಜೆ ನಡೆಯಲ್ಪಡುತ್ತದೆ ಹಾಗೂ ವಾರ್ಷಿಕವಾಗಿ ಕೋಲ ನಡೆಯುತ್ತದೆ.ಶ್ರೀ ಭಗವತಿ, ಬೇಟೆಗಾರ ಮತ್ತು ಇತರ ದೈವಗಳು, ಶ್ರೀ ಐವರು ದೈವಗಳು ಶ್ರೀ ಮಹಾ ವಿಷ್ಣು ಮೂರ್ತಿ,ಪೊಟ್ಟ ರಕ್ತೇಶ್ವರಿ ದೇವಸ್ಥಾನದ ಪ್ರಾಂಗಣದಲ್ಲಿ ಆರಾಧಿಸಲ್ಪಟ್ಟರೆ ,ಉಳ್ಳಾಗುಳು ಧರ್ಮದೈವ, ಕಲ್ಕುಡ, ಕಲ್ಲೂರ್ತಿ ಕೊರಗ ತನಿಯ, ನಾಗ ಮತ್ತು ಗುಳಿಕ ಬಂಟ ದೇವಸ್ಥಾನದ ಅಣತಿ ದೂರದಲ್ಲಿ ಆರಾಧಿಸಲ್ಪಡುತ್ತದೆ ಪ್ರತಿವರ್ಷ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಅಂದರೆ ಮಾರ್ಚ್ 9 ರಿಂದ 10 ರ ತನಕ ವಾರ್ಷಿಕ ಉತ್ಸವ ನಡೆಯಲ್ಪಡುತ್ತದೆ.

 ಶ್ರೀ ಭೂತನಾಥನೆಂದು ಗುರುತಿಸಲ್ಪಡುವ ಶ್ರೀ ಶಾಸ್ತಾವು ಕ್ಷೇತ್ರವು 101 ದೈವಗಳ ನೆಲೆ ಎಂದು ಪ್ರತೀತಿ. ಶನಿ ಗ್ರಹಚಾರ ದೋಷ ನಿವಾರಣಾರ್ಥವಾಗಿ ನಿತ್ಯ ನಡೆಯುತ್ತಿರುವ ಶನಿಪೂಜೆಗೆ ಬಹಳ ಮಹತ್ವವಿದ್ದು ಪರ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಪರಿಹಾರಕ್ಕಾಗಿ ಆಗಮಿಸುತ್ತಿದದಾರೆ. ಮೃತ್ಯುಂಜಯ ಹೋಮ, ಗ್ರಹಶಾಂತಿ, ಸಂಧಿ ಶಾಂತಿ, ಶನಿಶಾಂತಿ, ಹಾಗೂ ಇನ್ನಿತರ ಪ್ರಮುಖ ಹೋಮ ಹವನಗಳು ಅಲ್ಲದೆ ರುದ್ರಾಭಿಷೇಕ, ಕಾರ್ತಿಕಪೂಜೆ, ಮಹಾಪೂಜೆ, ರಂಗಪೂಜೆ ಇತ್ಯಾದಿ ಸೇವೆಗಳು ಕ್ರಮಬದ್ಧವಾಗಿ ನಿರಂತವಾಗ ನಡೆಯುತ್ತಿರುತ್ತದೆ. ಭಕ್ತರು ಸೇವೆ ಪ್ರಾರ್ಥನೆಯಿಂದ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಈ ನಮ್ಮ ಕ್ಷೇತ್ರಕ್ಕೆ ಆಗಮಿಸಿ, ನೆಮ್ಮದಿ, ಶಾಂತಿಯ ಬಾಳನ್ನು ಪಡೆದ ಹಲವು ನಿದರ್ಶನಗಳು ಕ್ಷೇತ್ರದಲ್ಲಿ ಕಂಡುಬರುತ್ತದೆ.

ಶ್ರೀ ಕ್ಷೇತ್ರದಲ್ಲಿ ಪ್ರಧಾನ ದೇವರಾಗಿ ಶ್ರೀ ಶಾಸ್ತಾವು ಸಪರಿವಾರ ದೇವರಾಗಿ ಶ್ರೀ ಮಹಾಗಣಪತಿ ಶ್ರೀ ಅನ್ನಪೂರ್ಣೇಶ್ವರಿ ನಿತ್ಯ ಮೂರು ಹೊತ್ತಿನ ಪೂಜೆಯೊಂದಿಗೆ ಆರಾಧಿಸಲ್ಪಡುತ್ತಿದೆ ದೇವಸ್ಥಾನದ ಹೊರಾಂಗಣದಲ್ಲಿ ಶಿವ ಪಾರ್ವತಿ ಎಂಬ ನಂಬಿಕೆಯಲ್ಲಿರುವ ಕರಿಭೂತ ಕೋಮಾಳಿ ಎಂಬ ದೈವಕ್ಕೆ ಎರಡು ಹೊತ್ತಿನ ಪೂಜೆ ನಡೆಯಲ್ಪಡುತ್ತದೆ ಹಾಗೂ ವಾರ್ಷಿಕವಾಗಿ ಕೋಲ ನಡೆಯುತ್ತದೆ.ಶ್ರೀ ಭಗವತಿ, ಬೇಟೆಗಾರ ಮತ್ತು ಇತರ ದೈವಗಳು, ಶ್ರೀ ಐವರು ದೈವಗಳು ಶ್ರೀ ಮಹಾ ವಿಷ್ಣು ಮೂರ್ತಿ,ಪೊಟ್ಟ ರಕ್ತೇಶ್ವರಿ ದೇವಸ್ಥಾನದ ಪ್ರಾಂಗಣದಲ್ಲಿ ಆರಾಧಿಸಲ್ಪಟ್ಟರೆ ,ಉಳ್ಳಾಗುಳು ಧರ್ಮದೈವ, ಕಲ್ಕುಡ, ಕಲ್ಲೂರ್ತಿ ಕೊರಗ ತನಿಯ, ನಾಗ ಮತ್ತು ಗುಳಿಕ ಬಂಟ ದೇವಸ್ಥಾನದ ಅಣತಿ ದೂರದಲ್ಲಿ ಆರಾಧಿಸಲ್ಪಡುತ್ತದೆ ಪ್ರತಿವರ್ಷ

ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಅಂದರೆ ಮಾರ್ಚ್ 9 ರಿಂದ 10 ರ ತನಕ ವಾರ್ಷಿಕ ಉತ್ಸವ ನಡೆಯಲ್ಪಡುತ್ತದೆ. ಶ್ರೀ ಭೂತನಾಥನೆಂದು ಗುರುತಿಸಲ್ಪಡುವ ಶ್ರೀ ಶಾಸ್ತಾವು ಕ್ಷೇತ್ರವು 101 ದೈವಗಳ ನೆಲೆ ಎಂದು ಪ್ರತೀತಿ. ಶನಿ ಗ್ರಹಚಾರ ದೋಷ ನಿವಾರಣಾರ್ಥವಾಗಿ ನಿತ್ಯ ನಡೆಯುತ್ತಿರುವ ಶನಿಪೂಜೆಗೆ ಬಹಳ ಮಹತ್ವವಿದ್ದು ಪರ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಪರಿಹಾರಕ್ಕಾಗಿ ಆಗಮಿಸುತ್ತಿದದಾರೆ. ಮೃತ್ಯುಂಜಯ ಹೋಮ, ಗ್ರಹಶಾಂತಿ, ಸಂಧಿ ಶಾಂತಿ, ಶನಿಶಾಂತಿ, ಹಾಗೂ ಇನ್ನಿತರ ಪ್ರಮುಖ ಹೋಮ ಹವನಗಳು ಅಲ್ಲದೆ ರುದ್ರಾಭಿಷೇಕ, ಕಾರ್ತಿಕಪೂಜೆ, ಮಹಾಪೂಜೆ, ರಂಗಪೂಜೆ ಇತ್ಯಾದಿ ಸೇವೆಗಳು ಕ್ರಮಬದ್ಧವಾಗಿ ನಿರಂತವಾಗ ನಡೆಯುತ್ತಿರುತ್ತದೆ. ಭಕ್ತರು ಸೇವೆ ಪ್ರಾರ್ಥನೆಯಿಂದ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಈ ನಮ್ಮ ಕ್ಷೇತ್ರಕ್ಕೆ ಆಗಮಿಸಿ, ನೆಮ್ಮದಿ, ಶಾಂತಿಯ ಬಾಳನ್ನು ಪಡೆದ ಹಲವು ನಿದರ್ಶನಗಳು ಕ್ಷೇತ್ರದಲ್ಲಿ ಕಂಡುಬರುತ್ತದೆ.

 ಷಷ್ಠಿ ದಿನದಂದು ಕ್ಷೇತ್ರದಲ್ಲಿ ಅನೇಕ ಮಂದಿ ಬೆಳ್ಳಿ ತುಣುಕುಗಳನ್ನು ಮಾರುವ ಸಂಪ್ರದಾಯವಿದೆ. ಈ ಹರಕೆಗಳನ್ನು ಹಾಗೂ ಶೃಂಗಾರ(ಹಿಂಗಾರ) ಬಾಳೆಹಣ್ಣು ಮೊದಲಾದವುಗಳನ್ನು ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ.ಷಷ್ಠಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಢಿಯೂ ಈ ಸಾನಿಧ್ಯದ ಆರಾಧಕ ವರ್ಗದಲ್ಲಿದೆ.