ಶ್ರೀ ಶಾಸ್ತಾವು ದೇವಸ್ಥಾನ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸೋಣ ಶನಿವಾರ, ವಿಶೇಷ ಶನಿ ಪೂಜೆ – ಕದಿರು ತುಂಬುವುದು ಹಾಗೂ ಶ್ರೀದೇವರಿಗೆ ನೈವೇದ್ಯ ಸಮರ್ಪಣೆ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕೊನೆಯ ಸೋಣ ಶನಿವಾರ, ವಿಶೇಷ ಶನಿ ಪೂಜೆ, ಕದಿರು ತುಂಬಿಸುವುದು, ಶ್ರೀ ದೇವರಿಗೆ ನವಾನ್ನ ಸಮರ್ಪಣೆ ಹಾಗೂ ಬಲಿಪಾಡು ಕೂಟ ನೇ 12 ರಂದು ನಡೆಯಿತು.

ಮಧ್ಯಾಹ್ನ ವಿಶೇಷ ಶನಿಪೂಜೆ ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿ ಹಾಗೂ ಶ್ರೀ ದೇವರಿಗೆ ನವಾನ್ನ ಸಮರ್ಪಣೆ ಬಳಿಕ ಮಕ್ಕಳಿಗೆ ನವಾನ್ನ ಪ್ರಸಾದ ನಡೆಯಿತು. ಈ ಸಂದರ್ಭದಲ್ಲಿ ಊರಿನ ಪರವೂರಿನಿಂದ ಹೆಜ್ಜನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಪಡೆದು ಕೃತಾರ್ಥರಾದರು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಎ ಬಿ ಎಲ್ ಇ ಕಮಿಟಿ (ಬಿ) ಅಧ್ಯಕ್ಷ ಡಾ| ಕೆ.ಪಿ ರೇಣುಕಾ ಪ್ರಸಾದ್ ಕುಟುಂಬ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಅನ್ನಪ್ರಸಾದದ ಅನ್ನದಾನಿಗಳಾಗಿದ್ದರು.

ಈ ಸಂದರ್ಭದಲ್ಲಿ ದೇವಸನ್ನಿಧಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ಜೊತೆ ಕಾರ್ಯದರ್ಶಿ ಚಿನ್ನಪ್ಪ ಅಡ್ಡ, ದೇವತಕ್ಕರು ರಾಜ ಗೋಪಾಲ ರಾಮಕಜೆ, ದೇವ ತಕ್ಕರು, ತಕ್ಕಮುಖ್ಯಸ್ಥರುಗಳು, ಮಾಜಿ ಮೊಕ್ತೇಸರರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಊರ – ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.