ಪೆರಾಜೆ ಶಾಸ್ತಾವು ದೇವಸ್ಥಾನಕ್ಕೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ| ಕೆ.ವಿ ರೇಣುಕಾ ಪ್ರಸಾದ್ ಭೇಟಿ
ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಎ ಒ ಎಲ್ ಇ ಕಮಿಟಿ (ಬಿ) ಅಧ್ಯಕ್ಷ ಡಾ| ಕೆ.ವಿ ರೇಣುಕಾ ಪ್ರಸಾದ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಆರ್ ಪ್ರಸಾದ್ ಸಕುಟುಂಬಿಕರಾಗಿ ಪೆರಾಜೆ ಶಾಸ್ತಾವು ದೇವಳಕ್ಕೆ ಆಗಮಿಸಿ ಶನಿಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಬೆಳಗಿನ ಉಪಾಹಾರದ ಬಾಬು ರೂ. 10,000 ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು ಜೊತೆ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ಸೇರಿದಂತೆ ದೇವತಕ್ಕರು ರಾಜ ಗೋಪಾಲ ರಾಮಕಜೆ, ತಕ್ಕಮುಖ್ಯಸ್ಥರುಗಳು, ಮಾಜಿ ಮೊತ್ತೇಸರು ನಾಗೇಶ್ ಕುಂದಲ್ಪಾಡಿ, ಸುಭಾಷ್ ಬಂಗಾರಕೋಡಿ, ಅರುಣ್ ಮಜಿಕೋಡಿ, ಎ..ಒ ಎಲ್ ಇ ಕಮಿಟಿ (ಬಿ ) ಕಮಿಟಿ ಪ್ರಸನ್ನ ಕಲ್ಲಾಜೆ, ಸತೀಶ್ ಕೊಯಿಂಗಾಜೆ, ಶ್ರೀಮತಿ ವೀಣಾ, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.